NavigationUser loginWho's onlineThere are currently 0 users and 4 guests online.
|
ಲೇಖನಬಿರುದು ಬೇಡದ `ಹಾಡು ಹಕ್ಕಿ'ಗೆ `ರಾಷ್ಟ್ರಕವಿ' ಸನ್ಮಾನಎಲ್ಲರಿಗೂ ೫೦ನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಈ ಸಂದರ್ಭದಲ್ಲಿ ರಾಷ್ಟ್ರಕವಿ ಬಿರುದಿಗೆ ಪಾತ್ರರಾಗಿರುವ ಜಿ.ಎಸ್.ಶಿವರುದ್ರಪ್ಪನವರ ಕುರಿತು ಆಹಿತಾನಲರ ಲೇಖನ - ಸಂ. ಗಾಳಿಯೊಳುಸಿರಾಡಿ ನಮ್ಮೆದೆಗೆಚ್ಚರವ ತರುತಿರು ಕೊಳಲೇ – ಭಾಗ ೪ಕಥಾವಸ್ತು ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಸ್ಪಂದಿಸಿದೆ: ಪೌರಾಣಿಕ ಹಿನ್ನೆಲೆ `ಗೋಕುಲ ನಿರ್ಗಮನ'ದ ಕಥಾವಸ್ತುವಾದಾಗಿದ್ದರೂ, ಅದು ಇಂದಿನ ಸಾಮಾಜಿಕ ಸಮಸ್ಯೆಗಳನ್ನೂ ಸ್ಪಂದಿಸುತ್ತದೆ. ಈ ಅಭಿಪ್ರಾಯವನ್ನು ಹಲವು ಹಿರಿಯ ವಿಮರ್ಶಕರು ವ್ಯಕ್ತಪಡಿಸಿದ್ದಾರೆ. ಅಲ್ಲಿ ವಿವರಿಸಿದ ಗೋಕುಲದ ಜೀವನ ಪೌರಾಣಿಕ `ವೈಭವೀಕರಣ'ಕ್ಕೆ ಒಳಗಾಗದೆ ಗಾಮೀಣ ಸರಳ ಜೀವನದ ಪಡಿನೆಳಲಿನಂತಿದೆ. ಬೆಣ್ಣೆ ಕದ್ದು, ಗೋಪಿಯರನ್ನು ಗೋಳ್ಹೊಯ್ದುಕೊಳ್ಳುತ್ತಿದ್ದ ಪುಂಡ ಬಾಲಕೃಷ್ಣ ಪ್ರೌಡನಾಗುವುದನ್ನು ನಾವು ಅವನು ಮಧುರೆಗೆ ಹೋಗುವ ನಿರ್ಣಯ ಕೈಗೊಂಡಾಗ ಕಾಣಬಹುದು. ಮಾನವ ಜೀವನದ ಒಂದು ಹಂತದಲ್ಲಿ ಅವನ ಬುದ್ಧಿ ಪಕ್ವವಾಗುದು ಪ್ರಕೃತಿಯ ಒಂದು ಅತಿ ಮುಖ್ಯ ಪ್ರಕ್ರಿಯೆ. ಆ ಪ್ರಕ್ರಿಯೆ ಇಲ್ಲಿ ನಡೆದಿದೆ. ಮಧುರೆಯ ಕರೆ ಬರಿಯ `ಬಿಲ್ಲು ಹಬ್ಬ'ವೆಂಬ ಮೋಜಿನಾಟಕ್ಕೊಂದೆ ಅಲ್ಲ; ಅದಕ್ಕೂ ಹೆಚ್ಚಿನ ಮಹತ್ವವುಳ್ಳ ಕರ್ತವ್ಯ ಪಾಲನೆಗೆ, ಅದು `ಕರ್ತವ್ಯದ ಕರೆ' - ಎಂಬ ತಿಳುವಳಿಕೆ ಕೃಷ್ಣನಲ್ಲಿ ಮೂಡುತ್ತದೆ. ದುಃಖದ ಮಧ್ಯದಲ್ಲೇ ಗೋಪಿಯರು ಹೇಳುವ, ಗಾಳಿಯೊಳುಸಿರಾಡಿ ನಮ್ಮೆದೆಗೆಚ್ಚರವ ತರುತಿರು ಕೊಳಲೇ – ಭಾಗ ೩ರಾಧೆಗಾದ ಅನ್ಯಾಯ: ಇನ್ನು ರಾಧೆಯ ವಿಚಾರ. ತನ್ನ ಹೃದಯದಲ್ಲಿ ಕೃಷ್ಣನೊಬ್ಬನಿಗೇ ಸ್ಥಾನ ಕೊಟ್ಟು ಅವನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕೃಷ್ಣ ಅವಳನ್ನು `ತೊರೆದು' ಮಧುರೆಗೆ ಹೋದಾಗ, ಅವಳು ಕಟ್ಟಿಕೊಂಡಿದ್ದ ಕನಸುಗಳೆಲ್ಲ ನುಚ್ಚು ನೂರಾಗಿರಬಹುದು. ಇದು ರಾಧೆಗಾದ ಒಂದು ಅಪರಾಧವೇ, ಅವಳ ಪಾಲಿಗೊಂದು ದುರಂತವೇ! ಗಾಳಿಯೊಳುಸಿರಾಡಿ ನಮ್ಮೆದೆಗೆಚ್ಚರವ ತರುತಿರು ಕೊಳಲೇ – ಭಾಗ ೨ಸೂ: ‘ಗೋಕುಲ ನಿರ್ಗಮನ’ ಗೀತ ನಾಟಕದ ಕುರಿತು ಆಹಿತಾನಲರ ಲೇಖನದ ಮೊದಲ ಭಾಗವನ್ನು ಈ ಹಿಂದೆ ಪ್ರಕಟಿಸಿರುತ್ತೇವೆ. ಕಾರಣಾಂತರಗಳಿಂದ ಇದರ ಉಳಿದ ಭಾಗಗಳು ತಪ್ಪಿ ಹೋಗಿದ್ದವು. ಇದಕ್ಕಾಗಿ ವಿಷಾದಿಸುತ್ತೇವೆ. ಈ ಲೇಖನದ ಉಳಿದ ೩ ಭಾಗಗಳನ್ನು ಈ ವಾರ ನಿಮ್ಮ ಮುಂದಿಡುತ್ತಿದ್ದೇವೆ. – ಸಂ. ಇಲ್ಲಿಯವರೆಗೆ.. ಲೇಖನ: ಅನಾವರಣ - ಸುಪ್ತದೀಪ್ತಿಅದೆಷ್ಟು ಜನ! ಎಲ್ಲಿದ್ದರವರು? ಅದ್ಹೇಗೆ ಒಗ್ಗೂಡಿದರು! ಯಾಕಾಗಿ? ಒಂದೂ ತಿಳಿಯದು. ಎಷ್ಟೋ ಹಿಂದಿನಿಂದಲೂ ಪ್ರತಿ ವರ್ಷವೂ ಹೀಗೇ ಬರುತ್ತಿದ್ದಾರೆ. ಈ ವರ್ಷವೂ ಕೂಡಾ! ಬಂದರು, ಬಂದರು; ಬರುತ್ತಲೇ ಇದ್ದರು. ಸುಮಾರು ಒಂದು ತಿಂಗಳ ಕಾಲ ಬಂದು ಬಂದು ಅಲ್ಲಿ, ಆ ವಿಶಾಲ ಪ್ರದೇಶದಲ್ಲಿ ಸೇರುತ್ತಿದ್ದರು. ಅಲ್ಲಿ ಮೊದಲೇ ಸುಂದರ ಮನೆಗಳಲ್ಲಿದ್ದ ಬಿಳಿ ಬಿಳೀ ಜನರನ್ನೆಲ್ಲ ಮೂಲೆಗುಂಪಾಗಿಸಿ, ಅಲ್ಲೆಲ್ಲ ತಮ್ಮ ಅಧಿಕಾರ ಸ್ಥಾಪಿಸಿಕೊಂಡ ಕರಿ ಕರೀ ಜನ, ಯಾರಿವರು? ಅದ್ಹೇಗೆ ತಿಳಿಯಬೇಕು ನಮಗೆ? ಮಾತಾಡಿಸಿದರೂ ಮಾತಾಡಲೊಲ್ಲರು; ನಮ್ಮ ಕಡೆಗೆ ನೋಡಲೂ ನೋಡರು. ತಮ್ಮ ಪಾಡಿಗೆ ತಾವು; ತಂತಮ್ಮೊಳಗೆ ಗುಂಗುಂ! ಹಾಗೆಂದು ಅವರಲ್ಲಿ ಅಂಥ ಸಂಭ್ರಮವೇನೂ ಕಾಣುವುದಿಲ್ಲ. ಬರೀ ಒಗ್ಗಟ್ಟು, ಬಲವಾದ ಒಗ್ಗಟ್ಟು. ಗಂಡುಗಳು, ಹೆಣ್ಣುಗಳು ವ್ಯತ್ಯಾಸವೇ ತಿಳಿಯದಂಥ ಮೈಕಟ್ಟು, ವೇಷ-ಭೂಷಣ. ಅನೇಕ ಮಕ್ಕಳು ಮರಿಗಳೂ ಇದ್ದಾರೆ. ಯಾರೀ ಜನ, ಯಾಕೆ ಬಂದರು, ಒಂದೂ ಗೊತ್ತಿಲ್ಲ. ಅಮ್ಮನ ನೆನಪಿನ ಕೆಲವು ಅಮೃತ ಘಳಿಗೆಗಳು"ಮದರ್ಸ್ ಡೇ" ಅಂಗವಾಗಿ ಆರ್ಕೇಡಿಯಾನಲ್ಲಿ ವಾಸವಾಗಿರುವ ಶ್ರೀ ಆಹಿತಾನಲ ಅವರ ಲೇಖನವನ್ನು ಅರ್ಪಿಸುತ್ತಿದ್ದೇವೆ. `ಅಮ್ಮ' ಎಂಬ ಕರೆ ಪ್ರೀತಿಯ ಪ್ರತೀಕ. ಅದು ಬರಿಯ ಎರಡು ಅಕ್ಷರಗಳ ಜೋಡಣೆ ಮಾತ್ರವಾಲ್ಲ; ಅದು ಒಂದು ಅಪೂರ್ವ ಅನುಭವ ನೀಡುವ `ಮಾಂತ್ರಿಕ' ಕರೆ! ಈ ಶಬ್ದದಲ್ಲಡಗಿರುವ ಅಪಾರ ಪ್ರೀತಿಯ ಪ್ರವಾಹದಿಂದ ಹರಿದು ಬಂದ ಆನಂದದ ಮುಂದೆ ಬೇರೆಲ್ಲವೂ ಕಿರಿದಾಗಿಯೇ ಕಾಣಿಸುವುದು. ಅಕ್ಷರ ಮಾಲೆಯ ಮೊದಲನೆಯ ಅಕ್ಷರವೇ `ಅ'. ಮಗುವು ಕಲಿಯುವ ಮೊದಲ ಮಾತೇ `ಅಮ್ಮ' ಎಂದು `ಅ'ಕಾರದಿಂದಲೇ ಪ್ರಾರಂಭವಾಗುವುದು. ಹೀಗೆ ಅದೇನೋ ಚಮತ್ಕಾರ `ಅ'ಕಾರದಲ್ಲಿ ಅಡಗಿದಂತಿದೆ! `ಅಮ್ಮ' ಎಂದು ಕರೆಯುವಾಗ ಮಗುವಿಗೆ ವ್ಯಾಕರಣ ಮತ್ತು ಅಕ್ಷರ ಮಾಲೆಯ ಗಂಧವಿರುವುದಿಲ್ಲ; ಶಬ್ದ ಜೋಡಣೆಯ ಅಂದವೂ ತಿಳಿದಿರುವುದಿಲ್ಲ. ಆದರೂ ಅದಾವುದೋ ಒಂದು ಅವ್ಯಕ್ತ ಅಂತರಂಗ ಪ್ರೇರಣೆಯೇ ಮಗುವನ್ನು ಹಾಗೆ ಕರೆಯವಂತೆ ಮಾಡುತ್ತದೆ. `ಅಮ್ಮ' ಎಂಬ ಶಬ್ದದಿಂದ ಮೂಡಿ ಬಂದ ಮಮತೆಯೇ ಈ ಪ್ರೇರಣೆಗೆ ಕಾರಣ. `ಅ'ಕಾರವು ಕಂಠದಿಂದ ಉದ್ಭವಿಸುವ ಚೈತನ್ಯದ ಸಂಕೇತವಾಗಿದೆ. ಮುಂದೆ ಮ-ಮ ಕೂಡಿದ ಒತ್ತಕ್ಷರ `ಮ್ಮ' ಸೇರಿ ಮಮ-ತೆಯನ್ನೇ ಸೂಸುತ್ತ `ಅ' ಸ್ವರದಿಂದಲೇ `ಅಮ್ಮ' ಎಂದು ಕೊನೆಗೊಳ್ಳುತ್ತದೆ. ಅಂತರಾಳದಿಂದ ಹುಟ್ಟಿ ಬಂದ ಮಗುವಿನ ಪ್ರೀತಿಯು `ಅಮ್ಮ' ಎಂಬ ಅಕ್ಕರೆಯ ಕರೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. `ಅಮ್ಮ' ಎಂಬ ಶಬ್ದದಲ್ಲಿ ತುಂಬಿ ತುಳುಕುತ್ತಿರುವ ಪ್ರೀತಿಯ ನೆಲೆಯನ್ನು ಅಳೆಯುವ ಸಾಮರ್ಥ್ಯವನ್ನು ಯಾವ ಗ್ರಂಥವೂ ಪಡೆದಿಲ್ಲವೋ ಏನೋ! ಅದು ನೀಡುವ ಅನುಭವವೇ, ಅನಂತವಾದ ಅಮೃತ ಕಡಲಲ್ಲಿ ತೇಲಾಡುವ ಅತ್ಯಾನಂದ! ಸೌಂದರ್ಯೋಪಾಸನೆಯೇ ದೇವರ ಪೂಜೆ - ಅಂತಿಮ ಭಾಗಬೇಲೂರು ಗುಡಿಯ ಸುತ್ತ ಮೆರೆಯುತ್ತಿರುವ ಅಂಗನೆಯರ ಅಂಗಾಂಗ ಸೌಂದರ್ಯವನ್ನು ಪ್ರದರ್ಶಿಸಲು, ಕೋತಿ, ಚೇಳು, ಗಿಳಿ, ಮೊದಲಾದ ಪ್ರಾಣಿಗಳೂ ಕಾರಣರಾಗುತ್ತಾರೆ. `ಕಪಿ ಕುಪಿತೆ' ಎಂಬ ಗೀತೆಯಲ್ಲಿ, ಕಪಿಯೊಂದು ತನ್ನ ಸೀರೆಯನ್ನು ಎಳೆಯಿತೆಂದು ಕೋಪ ಮಾಡಿಕೊಳ್ಳುತ್ತಾಳೆ ಒಬ್ಬ ಲಾವಣ್ಯವತಿ: ಸೌಂದರ್ಯೋಪಾಸನೆಯೇ ದೇವರ ಪೂಜೆ - ೩ಗುಡಿಯ ಪ್ರಾಕಾರದ ಸುತ್ತಲೂ ನಲಿಯುತ್ತಿರುವ ಶಿಲಾಬಾಲಿಕೆಯರು ನಾಟ್ಯಪಾರಂಗತರೂ ಹೌದು. ಅವರೆಲ್ಲರ ವಿವಿಧ ಬಗೆಯ ನರ್ತನಗಳು ನಮ್ಮೆಲ್ಲರ ಕಣ್ಮನಗಳನ್ನು ತಣಿಸುತ್ತವೆ, ಕುಣಿಸುತ್ತವೆ: ಝುಣಜ್ಝಣತ್ಕ ಕಿಂಕಿಣೀ | ಸೌಂದರ್ಯೋಪಾಸನೆಯೇ ದೇವರ ಪೂಜೆ - ಭಾಗ ೨ಬೇಲೂರು ಗುಡಿಯಲ್ಲಿ ಕಣ್ಣೆತ್ತಿ ಸುತ್ತಲಿನ ಗುಡಿಯ ಪ್ರಾಕಾರವನ್ನು ವೀಕ್ಷಿಸುತ್ತಿದ್ದಂತೆ `ಭಾವಾನಂದ ಲೋಕ'ದಲ್ಲಿ ವಿಹರಿಸುವ ಅನುಭವವಾಗುವುದು ಸಹಜ! ಸ್ವರ್ಗ ಲೋಕದ ಅಪ್ಸರೆಯಂತಿರುವ ಈ `ಮದನಿಕೆ'ಯರು ಈ `ಕಲಾ ಲೋಕ'ದಲ್ಲಿ ತಮ್ಮ ವಿವಿಧ ಹಾವ-ಭಾವಗಳ ಭಂಗಿಯನ್ನು ಪ್ರದರ್ಶಿಸುತಿದ್ದಾರೆ. ಒಂದೆಡೆ ಡಿವಿಜಿ ಯವರು ಈ ಶಿಲಾಬಾಲಿಕೆಯರನ್ನು ಈ ರೀತಿ ವರ್ಣಿಸುತ್ತಾರೆ: ಗಾಳಿಯೊಳುಸಿರಾಡಿ ನಮ್ಮೆದೆಗೆಚ್ಚರವ ತರುತಿರು ಕೊಳಲೇ – ಭಾಗ ೧ಸೂ: ಪು.ತಿ.ನ. ರಚಿಸಿರುವ ‘ಗೋಕುಲ ನಿರ್ಗಮನ’ ಗೀತ ನಾಟಕದ ಕುರಿತು ಆಹಿತಾನಲರ ಈ ಲೇಖನ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ "ಸ್ವರ್ಣ ಸೇತು" - ೨೦೦೫ನೆ ಸಾಲಿನ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಪು.ತಿ.ನ. ಜನ್ಮದಿನದ ಸಂದರ್ಭದಲ್ಲಿ ಇದನ್ನು ನಾಲ್ಕು ಭಾಗಗಳಲ್ಲಿ ಪ್ರಕಟಿಸಲಾಗುವುದು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ – ಸಂ. |
Popular content |