ಕವನ

ಕವನ: ಮನೆ - ಮಂಜುನಾಥ್

ಒಂದು ವಿಶಿಷ್ಟ ಬಗೆಯ 'ಮನೆ' ಕಟ್ಟ ಹೊರಟಿರುವ ಮಂಜುನಾಥ್, ವೃತ್ತಿಯಲ್ಲಿ ವೈದ್ಯರಾಗಿದ್ದು ಅಮೆರಿಕಾದ ಟೆಕ್ಸಾಸ್ ರಾಜ್ಯದ ಮಿಡ್‍ಲ್ಯಾಂಡ್‍ನಲ್ಲಿ ವಾಸವಾಗಿದ್ದಾರೆ - ಸಂ

ಕವನ: ಯಾತ್ರೆ - ಸುಪ್ತದೀಪ್ತಿ

ನೆಲವ ಕೊರೆದು, ಮರವ ಕಡಿದು,
ಸೋಗೆ, ಬಿದಿರು ಒಟ್ಟಣೆ,
ಪರಮಯಾತ್ರೆಗಟ್ಟಣೆ.
ಮುಂದೆ ಓದಿ..

ಕವನ: ಅಪ್ಪ - ತ.ವಿ.ಶ್ರೀನಿವಾಸ

ಜೂನ್ ೧೮ "ಫಾದರ್ಸ್ ಡೇ" ಪ್ರಯುಕ್ತ ಮುಂಬೈನ ತ.ವಿ.ಶ್ರೀನಿವಾಸ ಅವರ ಕವನ "ಅಪ್ಪ" ಪ್ರಕಟಿಸುತ್ತಿದ್ದೇವೆ - ಸಂ

ನಾ ನಿಮ್ಮ ಮರೆಯಲಾದೀತೇ
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ

ಕವನ: ಸ್ಮರಣೆ - ಕಾರ್ತಿಕ್.ಸಿ.ಎಸ್

ಬೆಂಗಳೂರಿನ ಐ.ಬಿ.ಎಂ.ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ವೃತ್ತಿಯಲ್ಲಿರುವ ಕಾರ್ತಿಕ್, ಕೆಲಸದ ಪ್ರಯುಕ್ತ ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ಎಂಡಿಕಾಟ್‍ಗೆ ಬಂದಿರುತ್ತಾರೆ. ಬೆಂಗಳೂರಿನಲ್ಲಿರುವ ತಮ್ಮ ತಾಯಿಗೆ ಸಮರ್ಪಿಸುತ್ತಾ ಈ ಕವನವನ್ನು ಬರೆದಿರುವರು - ಸಂ.

ಸ್ಮರಣೆ ಮಾತ್ರದಿ ಬಾಳ ಶಿಖರಕೆ ದಾರಿದೀಪವದಾಗುವ
ನೆನಪಿನಾಗರದಿಣುಕು ನೋಟವ ಮೆಲುಕು ಹಾಕುತ ನಲಿಯುವ ||

ಕವನ: ಮೊದಲ ಪ್ರೀತಿ - ವಾಣಿ ರಾಮದಾಸ್

ಗುಂಗುರು ಕೂದಲು, ನೀಳ ನಾಸೀಕ
ಅಗಲ ಹಣೆ, ಹಸನ್ಮುಖ
ಕೊರಳಲಿ ಪದಕ, ಕಿವಿಯಲ್ಲಿ ಕಡಗ
ಮೊದಲ ನೋಟಕೆ ಮರುಳಾದೆ!!

ಕವನ: ಸುರಸುಮಸಮ - ಸುಪ್ತದೀಪ್ತಿ

ನವಿರುನಿಶೆಯಲಿ ಚಿಮ್ಮಿತ್ತು
ಜೀವ ಚೇತನ ಸ್ಫೂರ್ತಿ
ಯಾವ ಲಾಸ್ಯಕೆ ಒಲಿದಿತ್ತು
ಮೊಗ್ಗಾಗಲಿಹ ಮೂರ್ತಿ

ಕವನ: ನಿತ್ಯ-ನೂತನ - ವಿಕ್ರಮ್ ಹತ್ವಾರ

ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷದ ಸಂದರ್ಭದಲ್ಲಿ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ವಿಕ್ರಮ್ ಹತ್ವಾರರ ಕವನ ನಿತ್ಯ-ನೂತನ - ಸಂ.

ಹೊಸತನದ ಆಗಮನಕೆ
ವರ್ತಮಾನದ ನಿರ್ಗಮನ..

ಕವನ: ಮರೆಯಲಾರದ ನೆನಪುಗಳು - ಪ್ರವೀಣ್ ಶಿವಶಂಕರ್

ಇಂದೇಕೆ ಮನದಲ್ಲಿ ಮಾರ್ದನಿಪ ನೀರವತೆ ?
ಸಂತೆ ಮಧ್ಯದಿ ಸೂಸಿ ಬಂದಿಹುದು ನಿರ್ಜನತೆ !
ಎಲ್ಲರೂ ಇದ್ದು ಇರದಿರುವಂದದ ಏಕಾಂತ
ಇರುವಿಕೆಯೇ ಸೂಳ್ಪಡೆವ ನವ ವಾದ ಸಿದ್ಧಾಂತ
ಮುಂದೆ ಓದಿ

ಕವನ: ಸಪ್ತಪದಿ - ವಾಣಿ ರಾಮದಾಸ್

ಮಾಂಗಲ್ಯಂ ತಂತು ನಾನೇನಾ ಮುಗಿದು
ನಿನ್ನ ಕರ ಪಿಡಿದು ನಾ ನಡೆದೆ
ನವ ಜೀವನದ ಸಪ್ತಪದಿಯನಿಡಲು!!

ನಾವಿಡುವ ಮೊದಲ ಹೆಜ್ಜೆ
ಈ ಜೀವನ ಸತ್ವದ ಪೋಷಣೆಗಾಗಿ
ಕೂಡುತ ಸಾಗೋಣ ಬಾ ಚೆಲುವೇ, ಮುಂಬರುವ ದಿನಗಳಲಿ!!
ಮುಂದೆ ಓದಿ

ಕವನ: ಅಗಲಿ ಹೋದವರು - ವಾಣಿ ರಾಮದಾಸ್

ವಾಣಿ ರಾಮದಾಸ್ ಅವರು ಸಿಂಗಪೂರಿನಲ್ಲಿ ವಾಸವಾಗಿದ್ದಾರೆ. ಕವನಗಳನ್ನು ಬರೆಯುವುದು ಇವರ ಹವ್ಯಾಸ. ಇವರ ಈ ಕವನದ ಶೀರ್ಷಿಕೆ - ಅಗಲಿ ಹೋದವರು.

ಹೋದವರು ಹೊರಟೇ ಹೋಗುತ್ತಾರೆ
ಒಮ್ಮೆಯೂ ನಮ್ಮತ್ತ ನೋಡದೆ
ಬಲು ದೂರದ ಊರಿಗೆ|

ಚಣ ಚಣವು ಕಾಡುವುದು
ಕದರುವುದು ಅವರ ನೆನಪು
ಅದನು ತಡೆಯಲಾರದೆ ನಿಂದ ನಮಗೆ||

XML feed